ಶೌಚಾಲಯ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ: ಕಟ್ಟಿಮನಿ
Nov 21 2023, 12:45 AM ISTಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಶೌಚಾಲಯ ಬಳಸಿ ಸ್ವಚ್ಛತೆ ಕಾಪಾಡಬೇಕು. ಸಮುದಾಯದ ಶೌಚಾಲಯ, ವೈಯಕ್ತಿಕ ಶೌಚಾಲಯ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಪೌರಾಯುಕ್ತ ಜೀವನ ಕಟ್ಟಿಮನಿ ಹೇಳಿದರು. ನಗರದ ತಿಮ್ಮಾಪುರ ವೃತ್ತದಲ್ಲಿ ವಿಶ್ವ ಶೌಚಾಲಯ ಜಾಗೃತಿ ಮತ್ತು ಮ್ಯಾರಥಾನ್ಗೆ ಡೊಳ್ಳು ಬಡಿಯುವ ಮೂಲಕ ಚಾಲನೆ ನೀಡಿ, ಶೌಚಾಲಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹಲವಾರು ರೋಗಗಳು ಬರುವ ಸಂಭವವಿದೆ ಎಂದು ಹೇಳಿದರು.