ಜಮೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯರ ಸೂಚನೆ ಮೇರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ಶಾಲೆ ಮಠಮಾನ್ಯ, ಸ್ಮಶಾನಗಳು ರೈತರ ಪಿತೃರ್ಜಿತವಾಗಿ ಬಂದಿರುವಂತ ಜಮೀನುಗಳನ್ನೂ ಬಿಡದಂತೆ ವಕ್ಫ್ ಸಮಿತಿ ಹೆಸರಿಗೆ ದಾಖಲಿಸುತ್ತಿರುವುದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ ಮುನಿಸ್ವಾಮಿ
ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಕಂದಾಯ ಅಧಿಕಾರಿಗಳ ಸಭೆ ನಡೆಸಿ ಒತ್ತಡಗಳನ್ನು ತಂದು ರೈತರ ಜಮೀನುಗಳನ್ನು ಕಬಳಿಸುವ ಷಡ್ಯಂತ್ರ ಮಾಡುತ್ತಿದ್ದು, ಇದಕ್ಕೆ ಸಿಎಂ, ಡಿಸಿಎಂ ಹಾಗೂ ಕಂದಾಯ ಸಚಿವರು ಸೇರಿದಂತೆ ಕ್ಯಾಬಿನೆಟ್‌ನ ಹಲವು ಸಚಿವರ ಬೆಂಬಲಿಸಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್ ಬಣದ ಮುಖಂಡ ಹಾಗೂ ಸಂಸದ ಅರವಿಂದ ಸಾವಂತ್ ಅವರು, ಶಿಂಧೆ ಬಣದ ಶಿವಸೇನೆ ಅಭ್ಯರ್ಥಿ ಆಗಿ ಸ್ಪರ್ಧಿಸಿರುವ ಬಿಜೆಪಿ ನಾಯಕಿ ಶೈನಾ ಎನ್.ಸಿ. ಅವರನ್ನು ‘ಇಂಪೋರ್ಟೆಡ್ ಮಾಲು’ (ಆಮದಾದ ಸರಕು) ಎಂದು ಟೀಕಿಸಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.