26 ಕೋಟಿ ರು. ವೆಚ್ಚದಲ್ಲಿ ಸುರತ್ಕಲ್- ಬಿ.ಸಿ. ರೋಡ್ ಹೆದ್ದಾರಿಗೆ ಕಾಯಕಲ್ಪ: ಸಂಸದ ಕ್ಯಾ.ಚೌಟ
Mar 11 2025, 12:47 AM ISTಒಟ್ಟು 26.05 ಕೋಟಿ ರು. ವೆಚ್ಚದಲ್ಲಿ ಸುರತ್ಕಲ್ನಿಂದ ಎಪಿಎಂಸಿ, ಕೂಳೂರಿನಿಂದ ಎಜೆ ಆಸ್ಪತ್ರೆ ಹಾಗೂ ನಂತೂರಿನಿಂದ ಪಡೀಲ್ವರೆಗಿನ 11.084 ಕಿಮೀ. ಉದ್ದದ ರಸ್ತೆಯ ಡಾಂಬರೀಕರಣ ನಡೆಯಲಿದೆ. ಅಲ್ಲದೆ ಹೆದ್ದಾರಿ ಬದಿ ಬೆಳೆದಿರುವ ಗಿಡ-ಗಂಟಿ ತೆಗೆಯುವ ಹಾಗೂ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.