ಹೇಮಾವತಿ ಸಕ್ಕರೆ ಕಾರ್ಖಾನೆಯ ವಾರ್ಷಿಕ ಮಹಾಸಭೆ
Sep 27 2024, 01:22 AM ISTಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಷೇರುದಾರರ ಒತ್ತಾಯದ ಮೇರೆಗೆ ಮರಣ ನಿಧಿ ಸ್ಥಾಪನೆಗಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ೫೦ ಲಕ್ಷ ರುಪಾಯಿಗಳನ್ನು ಮೀಸಲಿಟ್ಟು, ಸಕ್ಕರೆ ನಿರ್ದೇಶನಾಲಯ ಮತ್ತು ಆಡಳಿತ ಮಂಡಳಿಯೊಂದಿಗೆ ಕೂಲಂಕಷವಾಗಿ ಚರ್ಚಿಸಿ ಗಮನಹರಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ೩೨ ಸಾವಿರ ಷೇರುದಾರರಿದ್ದು, ಅವರಿಗೆ ಗೌರವ ಕೊಡುವ ರೀತಿಯಲ್ಲಿ ಮರಣ ನಿಧಿ ನೀಡುವಂತಾಗಬೇಕಾಗಿರುವುದರಿಂದ ಈ ಕುರಿತು ಸಮಗ್ರವಾಗಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದೆಂದರು.