ಶಿಥಿಲಗೊಂಡ ರಂಗನಕೊಪ್ಪಲು ಸರ್ಕಾರಿ ಶಾಲೆ ಕಟ್ಟಡ
Oct 25 2025, 01:00 AM ISTಮಾದಿಹಳ್ಳಿ ಹೋಬಳಿ, ಆಂದಲೆ ಗ್ರಾಮ ಪಂಚಾಯಿತಿ ವ್ಯಾಪ್ತಿ ರಂಗನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಪ್ರತಿವರ್ಷ ಸುರಿಯುವ ಭಾರಿ ಮಳೆಯಿಂದ ಶಾಲೆಯ ಆರ್‌ಸಿಸಿ ಮೇಲ್ಛಾವಣಿ ಮತ್ತು ಗೋಡೆಗಳು ಹಾಳಾಗಿದ್ದು, ಈಗ ಸುರಿಯುತ್ತಿರುವ ಮಳೆಗೆ ಸೋರುತ್ತಿದೆ. ಶಾಲಾ ಕೊಠಡಿಯಲ್ಲಿ ಕುಳಿತು ಪಾಠ ಕೇಳಲು ಮಕ್ಕಳು ಹೆದರುತ್ತಿದ್ದಾರೆ. ಮಕ್ಕಳು ಜೀವಭಯದ ನಡುವೆ ಮುಂದೇನು ಗತಿ ಕಾದಿದೆ ಎಂದು ಶಾಲೆಗೆ ತೆರಳುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.