ಸರ್ಕಾರಿ ಶಾಲಾ ಕೊಠಡಿ ಕಾಂಕ್ರೀಟ್ ಕುಸಿದು ಬಿದ್ದು ವಿದ್ಯಾರ್ಥಿಗೆ ಗಾಯ
Mar 01 2025, 01:04 AM IST ತ್ಯಾಮಗೊಂಡ್ಲು ಪಟ್ಟಣದ ಹೊಸ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿ ಮೇಲ್ಛಾವಣಿಯ ಕಾಂಕ್ರೀಟ್ ಪದರ ಉದುರಿ ಬಿದ್ದು ಒಬ್ಬ ವಿದ್ಯಾರ್ಥಿಗೆ ಗಾಯವಾಗಿದ್ದು, ಇನ್ನುಳಿದ ವಿದ್ಯಾರ್ಥಿಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.ಕೊಠಡಿಯಲ್ಲಿ ಮಕ್ಕಳು ಮಧ್ಯಾಹ್ನ ಊಟ ಮಾಡುವ ವೇಳೆ ಏಕಾಏಕಿ ಮೇಲ್ಛಾವಣಿಯ ಕಾಂಕ್ರಿಟ್ ಪದರ ಉದುರಿ ಮಕ್ಕಳ ಮೇಲೆ ಬಿದ್ದಿದೆ.