ಸರ್ಕಾರಿ ಜಾಗ ಒತ್ತುವರಿಯಾದರೆ ಅಧಿಕಾರಿಗಳೆ ಹೊಣೆ
May 16 2025, 01:55 AM ISTಕನ್ನಡಪ್ರಭ ವಾರ್ತೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ವ್ಯಾಪ್ತಿಯ ಜಾಗಗಳನ್ನು ಗುರುತಿಸಿ ಸೂಕ್ತ ಸಂರಕ್ಷಣೆಗೆ ಕ್ರಮ ವಹಿಸಬೇಕು. ಒಂದಡಿ ಸರ್ಕಾರಿ ಜಾಗ ಅತಿಕ್ರಮಣ, ಒತ್ತುವರಿ ಕಬಳಿಕೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಮಾಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಖಾತೆ ಸಚಿವ ಬಿ.ಎಸ್.ಸುರೇಶ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.