‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.12ರಷ್ಟು ಬಸ್ ಪ್ರಯಾಣ ದರ ಹೆಚ್ಚಿಸಿದ್ದರು. ಅಲ್ಲದೆ, 2008-2013ರವರೆಗೆ ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಶೇ.47.8ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಬಿಎಂಟಿಸಿಗೆ 2,019 ಹೊಸ ಬಸ್ಗಳನ್ನು ಸೇರ್ಪಡೆಗೆ ಮುಂದಾಗಿದ್ದು, ಅದರಲ್ಲಿ 1,400ಕ್ಕೂ ಹೆಚ್ಚಿನ ಬಸ್ಗಳು ಈಗಾಗಲೇ ನಿಗಮಕ್ಕೆ ಸೇರ್ಪಡೆ ಮಾಡಲಾಗಿದೆ.