ಕನ್ನಡ ಸಾಹಿತ್ಯ ಉಳಿವಿಗೆ ಹೋರಾಟ ಸ್ಥಿತಿ ವಿಷಾದನೀಯ
Jan 03 2024, 01:45 AM ISTಕನ್ನಡ ಭಾಷೆ, ನಾಡು, ಜಲ, ಸಂಸ್ಕೃತಿ ಇನ್ನಿತರೆ ವಿಷಯಗಳು ಮಕ್ಕಳನ್ನು ಸೆಳೆಯಬೇಕು. ಇದಕ್ಕಾಗಿಯೇ ಮಕ್ಕಳ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ಇಂಥ ಸಮ್ಮೇಳನಗಳು ಅವರಲ್ಲಿನ ನಾಡಿನಪ್ರಜ್ಞೆ ಜಾಗೃತಗೊಳಿಸುತ್ತವೆ. ಈ ಮಾತಿಗೆ ಪೂರಕವಾಗಿ ಭದ್ರಾ ಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ ಭದ್ರಾವತಿಯಲ್ಲಿ ನಡದ ಮಕ್ಕಳ 10ನೇ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಕಾಳಜಿ ನುಡಿದಿದ್ದಾರೆ. ಹಿಂದಿನ ಕಾಲದಲ್ಲಿ ಕನ್ನಡ ಸಾಹಿತ್ಯ ಉನ್ನತ ಸ್ಥಿತಿಯಲ್ಲಿದ್ದು, ಇಂದು ಕನ್ನಡ ಸಾಹಿತ್ಯದ ಉಳಿವಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದು ವಿಷಾದಿಸಿದ್ದಾರೆ.