ಸಿದ್ದರಾಮ ಉಪ್ಪಿನಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ
Dec 26 2023, 01:30 AM ISTಆಲಮೇಲ: ಪಟ್ಟಣದ ಹಿರಿಯ ಕಾದಂಬರಿಕಾರ, ಬಂಡಾಯ ಸಾಹಿತಿ ಸಿದ್ದರಾಮ ಉಪ್ಪಿನ ಅವರಿಗೆ ಸಮಗ್ರ ಸಾಹಿತ್ಯ ಮತ್ತು ಜೀವಮಾನ ಸಾಧನೆಯ ಗೌರವಾರ್ಥ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಉಪ್ಪಿನ ಅವರು ಕಾದಂಬರಿ, ಜೀವನ ಚರಿತ್ರೆ, ಆತ್ಮಕಥನ, ಲಲಿತ ಪ್ರಬಂಧ, ವ್ಯಕ್ತಿ ಚಿತ್ರಣ, ಕಾವ್ಯ ಈ ಎಲ್ಲ ಪ್ರಕಾರಗಳ ಸಾಹಿತ್ಯ ಕೃಷಿಯಲ್ಲಿ ತೊಡಗಿ ಅವರು ಸರಿಸುಮಾರು 23ಕ್ಕೂ ಅಧಿಕ ಗ್ರಂಥಗಳನ್ನು ರಚಿಸಿದ್ದಾರೆ.