ಸಮಾಜ ಸುಧಾರಣೆಯಲ್ಲಿ ವಚನ ಸಾಹಿತ್ಯ ಕೊಡುಗೆ ಅಮೂಲ್ಯ
Jan 17 2024, 01:47 AM ISTಸಮಾಜ ಸುಧಾರಣೆಯಲ್ಲಿ ವಚನ ಸಾಹಿತ್ಯದ ಕೊಡುಗೆ ಅಮೂಲ್ಯವಾಗಿದೆ. ಸಾಹಿತ್ಯ, ವಚನ ರಚನೆ ಕೇವಲ ಮೇಲ್ವರ್ಗ, ರಾಜಾಶ್ರಯದ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಜನಸಾಮಾನ್ಯರು ವಚನ ಸಾಹಿತ್ಯ ರಚನೆ ಮೂಲಕ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು 12ನೇ ಶತಮಾನದಲ್ಲಿ ಸಿದ್ದರಾಮೇಶ್ವರ ಅವರು ಕಾಯಕ ವೃತ್ತಿ ಜತೆಗೆ ತೋರಿಸಿಕೊಟ್ಟಿದ್ದಾರೆ ಎಂದು ಶಿಕಾರಿಪುರ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಹೇಳಿದ್ದಾರೆ.