ನೈತಿಕ ಹೊಣೆಯಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಎಂ.ಪಿ.ರೇಣುಕಾಚಾರ್ಯ
Feb 11 2024, 01:46 AM ISTನಮ್ಮ ಸರ್ಕಾರದ ವಿರುದ್ಧ 40 ಪರ್ಸೆಂಟೇಜ್ ಸರ್ಕಾರ, ಪೇ ಸಿಎಂ ಅಂತೆಲ್ಲಾ ಕಾಂಗ್ರೆಸ್ಸಿಗರು ಆರೋಪ ಮಾಡಿದ್ದರು. ಈಗ ಅದೇ ಕೆಂಪಣ್ಣ ಕಾಂಗ್ರೆಸ್ ಸರ್ಕಾರದ ವಿರುದ್ಧ 40 ಪರ್ಸೆಂಟೇಜ್ ಸರ್ಕಾರವೆಂದು, ಯಾವುದೇ ಬಿಲ್ ಕೂಡ ಬಿಡುಗಡೆಯಾಗಿಲ್ಲವೆಂಬ ಆರೋಪ ಮಾಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಗೆ ಡಾಕ್ಟರೇಟ್ ನೀಡಬೇಕು. ಗುತ್ತಿಗೆದಾರರ ಸಂಘದವರೇ ಆರೋಪ ಮಾಡಿದ್ದರೂ ಸ್ಪಷ್ಟ ಪ್ರತಿಕ್ರಿಯೆ ಕಾಂಗ್ರೆಸ್ನವರು ನೀಡುತ್ತಿಲ್ಲ.