ಕೂಲಿ ಮಾಡದಿದ್ದರೂ ಖಾತೆಗೆ ಬಂತು ನರೇಗಾ ಹಣ
Jan 11 2024, 01:30 AM ISTನರೇಗಾ ಯೋಜನೆಯಡಿ ಕೂಲಿ ಮಾಡದಿದ್ದರೂ ಕೂಲಿಯ ಹಣವನ್ನು ದೊಡ್ಡಿಂದುವಾಡಿ ಗ್ರಾಪಂ ಖಾತೆದಾರರೊಬ್ಬರಿಗೆ 3476 ರು. ಹಣ ಹಾಕುವ ಮೂಲಕ ವಿವಾದಕ್ಕಿಡಾಗಿದೆ. ತಾಲೂಕಿನ ದೊಡ್ಡಿಂದುವಾಡಿ ಗ್ರಾಪಂಯಲ್ಲಿನ ನಿವಾಸಿ ಪ್ರಸಾದ್ ಎಂಬುವರು ಉದ್ಯೋಗಖಾತ್ರಿ ಯೋಜನೆಯಡಿ ಒಂದು ದಿನವೂ ಕೂಲಿ ಕೆಲಸಕ್ಕೆ ತೆರಳಿಲ್ಲ, ಅರ್ಜಿಯನ್ನು ಸಹಾ ಹಾಕಿಲ್ಲ, ಆದರೂ ಸಹಾ ಇವರ ಭಾರತೀಯ ಸ್ಟೇಟ್ ಬ್ಯಾಂಕ್,  ದೊಡ್ಡಿಂದುವಾಡಿ ಗ್ರಾಮ ಶಾಖೆಯಲ್ಲಿ 64142948060 ಈ ಖಾತೆಗೆ ದಿನಾಂಕ 10-11-2023 ರಲ್ಲಿ 2 ಬಾರಿ  ಕ್ರಮವಾಗಿ 1580 ರು., 1896 ರು. ಗಳನ್ನು  ಹಾಕುವ ಮೂಲಕ  ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. ಒಟ್ಟಾರೆ ಪ್ರಸಾದ್ ಅವರ ಖಾತೆಗೆ 3476 ಜಮಾ ಮಾಡಿದೆ.