ಸಾಧನಗಳಿಂದ ದೂರವಿರುವುದನ್ನು ಕಲಿಯಿರಿ: ಪ್ರೊ.ಜಿ.ಆರ್. ಅಂಗಡಿ
May 30 2025, 12:47 AM ISTಇತ್ತೀಚಿನ ದಿನಗಳಲ್ಲಿ ದೊಡ್ಡವರು, ಚಿಕ್ಕವರು ಎನ್ನದೆ ಎಲ್ಲಾ ವಯೋಮಾನದವರು ಮೊಬೈಲ್ ದಾಸರಾಗಿದ್ದೇವೆ. ನಮ್ಮ ಜೀವನವನ್ನೇ ಮೊಬೈಲ್‌ಗೆ ಸ್ಥಳಾಂತರಿಸಿಕೊಂಡಿರುವಂತೆ ಬದುಕುತ್ತಿದ್ದೇವೆ. ಮೊಬೈಲ್ ಇಲ್ಲದೆ ಮಕ್ಕಳು ಊಟ ಮಾಡುವುದಿಲ್ಲ ಎಂಬ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ. ಸಾಧನಗಳ ಅತಿಯಾದ ಅವಲಂಬನೆ ಒಳ್ಳೆಯದಲ್ಲ.