ಪತ್ರಕರ್ತರ ಸಂಘದಿಂದ ಸದಸ್ಯರಿಗೆ ಅಪಘಾತ ವಿಮೆ ಬಾಂಡ್ ವಿತರಣೆ
Dec 31 2024, 01:01 AM ISTಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಸದಸ್ಯರ ಬಹು ವರ್ಷದ ಬೇಡಿಕೆಯಂತೆ ಅಪಘಾತ ವಿಮೆ ಮಾಡಿಸಿದ್ದು, ನಗರದ ಗಾಂಧಿಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತನ್ನ ಸದಸ್ಯರಿಗೆ ವಿಮಾ ಬಾಂಡ್ಗಳನ್ನು ವಿತರಣೆ ಮಾಡಲಾಯಿತು. ಇದೇ ವೇಳೆ ಈ ವರ್ಷದ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಬಿ. ಮದನ್ ಗೌಡ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಎಚ್.ಬಿ. ಮದನ್ ಗೌಡರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಉತ್ತಮವಾಗಿದೆ ಎಂದು ಬಣ್ಣಿಸಿದರು. ಪತ್ರಕರ್ತರ ಗ್ರಾಮಿಣ ಬಸ್ಪಾಸ್ ಇನ್ನೊಂದು ವಾರದಲ್ಲಿ ಸಿಗಲಿದೆ ಎಂದು ಹೇಳಿದರು.