ಶೀಘ್ರ ಸಹಸ್ರ ಕೂಟ ಜೀನಾಲಯ ಅಭಿವೃದ್ಧಿ
Dec 27 2024, 12:47 AM ISTಅರಸೀಕೆರೆ ನಗರದಲ್ಲಿರುವ ಏಕಶೀಲ ಸಹಸ್ರಕೂಟ ಜಿನಾಲಯ ದೇಶದಲ್ಲಿಯೇ ವಿಶಿಷ್ಟವಾಗಿದೆ. ಈ ಬಸದಿಯನ್ನು ಮೂಲ ಸೌಕರ್ಯಗಳ ಮೂಲಕ ಅಭಿವೃದ್ಧಿಪಡಿಸಲು ಕಾರ್ಯ ಪ್ರವೃತ್ತವಾಗಲಿದ್ದು, ಶ್ರವಣಬೆಳಗೊಳ ಶ್ರೀಮಠವು ಎಲ್ಲ ರೀತಿಯ ಜವಾಬ್ದಾರಿ ತೆಗೆದುಕೊಂಡು ಸ್ಥಳೀಯ ಜಿನಾಲಯವನ್ನು ವಿಶ್ವದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರವನ್ನಾಗಿ ಕೊಂಡೊಯ್ಯಲಾಗುವುದು ಎಂದು ಶ್ರವಣಬೆಳಗೊಳ ಶ್ರೀಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.