ಅವಘಡ ತಪ್ಪಿಸುವ ಅಗ್ನಿಶಾಮಕ ದಳಕ್ಕೆ ವಾಹನ ಕೊರತೆ
Nov 09 2024, 01:03 AM ISTಕನ್ನಡಪ್ರಭ ವಾರ್ತೆ ಇಂಡಿ ನಗರದ ಅಗ್ನಿಶಾಮಕ ಠಾಣೆಯಲ್ಲಿ ಅಗತ್ಯ ಸಿಬ್ಬಂದಿ ಇದ್ದಾರೆ. ಆದರೆ, ಎಲ್ಲಾದರೂ ಅವಘಡ ನಡೆದರೆ ಬೇಕಾದ ರಕ್ಷಣಾ ಸಾಮಗ್ರಿ ಹಾಗೂ ಬೆಂಕಿ ನಂದಿಸುವ ವಾಹನಗಳು ಇಲ್ಲ.ಇರುವ ಎರಡು ವಾಹನಗಳಲ್ಲಿ ಒಂದು 30 ವರ್ಷ ಪೂರ್ಣಗೊಳಿಸಿದೆ.ಇನ್ನೊಂದು 15 ವರ್ಷ ಪೂರ್ಣಗೊಳಿಸುರುವುದರಿಂದ ರಸ್ತೆಗೆ ಓಡಾಡುವುದಿಲ್ಲ. ಹೀಗಾಗಿ ವಿಜಯಪುರದಿಂದ ಒಂದು ಅಗ್ನಿಶಾಮಕ ವಾಹನ ಕಳುಹಿಸಿದ್ದು, ಅದರ ಮೂಲಕವೇ ಇಂಡಿ-ಚಡಚಣ ತಾಲೂಕುಗಳ ಗ್ರಾಮಗಳಿಗೆ ತುರ್ತು ಸೇವೆ ನೀಡಬೇಕಾಗಿದೆ.