ಆಕಸ್ಮಿಕ ಅಗ್ನಿ ಅವಘಡ: ಕಾರು ಬೆಂಕಿಗಾಹುತಿ
Apr 07 2024, 01:50 AM ISTವಿಜಯಪುರ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರೊಂದು ಹೊತ್ತಿ ಉರಿದಿರುವ ಘಟನೆ ತಾಲೂಕಿನ ಹೊನ್ನುಟಗಿ ಬಳಿ ಸಿಂದಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶುಕ್ರವಾರ ನಡೆದಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರು ರಸ್ತೆ ಬದಿಗೆ ನಿಲ್ಲಿಸಿ ಚಾಲಕ ಕಾರಿನಿಂದ ಇಳಿದು ಹೊರಗೆ ಓಡಿ ಬಂದಿದ್ದಾನೆ. ಹೀಗಾಗಿ, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.