ಪಿಡಿಒಗಳಿಂದ ಕರ್ತವ್ಯ ಲೋಪ, ಹಣ ದುರುಪಯೋಗದ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ
Jan 20 2024, 02:01 AM ISTಗ್ರಾಪಂ ಪಿಡಿಒಗಳಾಗಿದ್ದ ಶಿವಲಿಂಗೇಗೌಡ, ತಿಲಕ್ಕುಮಾರ್ ಹಾಗೂ ನಾಗೇಂದ್ರ ಅವರು ಕರ್ತವ್ಯ ಲೋಪವೆಸಗಿ ಹಣ ದುರುಪಯೋಗ, ಕಾನೂನು ಉಲ್ಲಂಘನೆ ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಚೆಸ್ಕಾಂ ಇಲಾಖೆಗೆ ಹಣ ಪಾವತಿ ಮಾಡಲು ಪಂಚಾಯ್ತಿ ಖಾತೆಯಲ್ಲಿ ಹಣ ಇದ್ದರೂ ಸಹ ವರ್ಷಗಟ್ಟಲೆ ಹಣ ಪಾವತಿ ಮಾಡದೆ ಬಡ್ಡಿ ದಂಡ ಕಟ್ಟುವಂತೆ ಮಾಡಿದ್ದಾರೆ. ನರೇಗಾ ಕಾಮಗಾರಿಯಲ್ಲಿ ಲೋಪವೆಸಗಿರುವುದು, ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಹಣ ಪಾವತಿಸದೆ ಲೋಪ, ಎಸ್ಟಿಒ ಹಣಗಳನ್ನು ರದ್ದುಗೊಳಿಸುವುದು ಸೇರಿದಂತೆ ಹಲವು ಲೋಪವೆಸಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಿಲ್ಲ