ಆಪರೇಷನ್ ಸಿಂದೂರ ವಿರುದ್ಧ ಕೈಪಡೆಗೆ ಅಪಪ್ರಚಾರದ ಟಾಸ್ಕ್: ರೇಣು ಆರೋಪ
May 17 2025, 01:22 AM ISTಆಪರೇಷನ್ ಸಿಂದೂರ ಬಗ್ಗೆ ಕಾಂಗ್ರೆಸ್ಸಿನ ನಾಯಕರಲ್ಲೇ ದ್ವಂದ್ವ ಕಾಣಿಸುತ್ತಿದೆ. ಸಚಿವರಾದ ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಕೃಷ್ಣ ಬೈರೇಗೌಡ, ಕೋಲಾರದ ಶಾಸಕ ಮಂಜುನಾಥ ಅವರ ಹೇಳಿಕೆಗಳನ್ನು ಗಮನಿಸಿದರೆ, ಆಪರೇಷನ್ ಸಿಂದೂರ ಬಗ್ಗೆ ಅಪಪ್ರಚಾರದ ಟಾಸ್ಕನ್ನೇ ಕಾಂಗ್ರೆಸ್ ಪಕ್ಷ ಕೊಟ್ಟಂತಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.