ಕಸಾಪ ರಾಜ್ಯಾಧ್ಯಕ್ಷರಿಂದ ಆರ್ಥಿಕ ಅಶಿಸ್ತು: ಕೆಟಿಎಸ್ ಆರೋಪ
May 06 2025, 12:17 AM IST೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡಿದ್ದ ೩೦ ಕೋಟಿ ರು. ಅನುದಾನದಲ್ಲಿ ೨.೫೦ ಕೋಟಿ ರು. ಹಣವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಪಡೆದಿದೆ. ಜಿಲ್ಲಾಡಳಿತ ಮತ್ತು ಸ್ವಾಗತ ಸಮಿತಿ ೨೭.೫೦ ಕೋಟಿ ರು. ವೆಚ್ಚ ಮಾಡಿ ಲೆಕ್ಕಪತ್ರಗಳನ್ನು ನೀಡಿದ್ದಾರೆ. ಆದರೆ, ಡಾ.ಮಹೇಶ್ ಜೋಶಿ ಅವರು ೨.೫೦ ಕೋಟಿ ರು.ಗೆ ಇದುವರೆಗೂ ಲೆಕ್ಕ ನೀಡದೆ ಇನ್ನೂ ಆರು ತಿಂಗಳ ಸಮಯವಿದೆ. ಆ ನಂತರ ಲೆಕ್ಕ ಕೊಡುತ್ತೇನೆ ಎಂದು ಉದ್ಧಟತನ ಮೆರೆದಿದ್ದಾರೆ.