ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ್ ಆರೋಪ ತಳ್ಳಿಹಾಕಿದ ಉಮೇಶ್
Sep 21 2025, 02:00 AM ISTಬಿ.ಎಚ್.ರಸ್ತೆಯ ಡಿವೈಡರ್‌ಗೆ ಕಬ್ಬಿಣದ ಬೇಲಿ ಅಳವಡಿಸುವ ಕಾಮಗಾರಿ ಹಾಗೂ ಒಣ ಕಸ, ಹಸಿ ಕಸ ಬೇರ್ಪಡಿಸಿ ಗೊಬ್ಬರ ತಯಾರಿಸುವ ಘಟಕದ ಕಾಮಗಾರಿಯನ್ನು ನಾನೇ ಟೆಂಡರ್ ಮೂಲಕ ಕೈಗೊಂಡಿದ್ದೇನೆ ಎಂದು ಗುತ್ತಿಗೆದಾರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ಕಾಟಿಕೆರೆ ಉಮೇಶ್ ತಿಳಿಸಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದವರು ಇಂತಹ ಆಧಾರರಹಿತ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಗಿರೀಶ್ ಅವರನ್ನು ಪರೋಕ್ಷವಾಗಿ ಟೀಕಿಸಿದರು.