ಯುವನಿಧಿ ಕಾರ್ಯಕ್ರಮ ಯುವಜನತೆ ಕಣ್ಣಿಗೆ ಮಣ್ಣೆರೆಚುವ ತಂತ್ರ: ಸಂಸದ ಆರೋಪ
Jan 14 2024, 01:37 AM ISTರಾಜಕೀಯ ಎಂದ ಮೇಲೆ ಹೊಗೊಳೋದು ಇದ್ದಿದ್ದೇ, ತೆಗಳೋದೂ ಇದ್ದಿದ್ದೆ. ಈ ಮಾತಿಗೆ ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಯುವನಿಧಿ ಯೋಜನೆ ಚಾಲನೆ ಸಾಕ್ಷಿ. ಏಕೆಂದರೆ, ಕಾಂಗ್ರೆಸ್ ಸರ್ಕಾರದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಯುವನಿಧಿ ಉತ್ತಮ ಯೋಜನೆ ಎಂದಿದ್ದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಯುವನಿಧಿ ಯೋಜನೆ ಯುವಜನತೆ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ ಎಂದು ಟೀಕಿಸಿದ್ದಾರೆ.