ದೇಶದ್ರೋಹ ಹೇಳಿಕೆ ನೀಡೋರ ಕೊಲ್ಲುವ ಕಾಯ್ದೆ ತನ್ನಿ ಎಂದಿದ್ದಕ್ಕೆ ನೋಟಿಸ್‌: ಈಶ್ವರಪ್ಪ ಕಿಡಿ

Feb 11 2024, 01:46 AM IST
ದೇಶದ ವಿಭಜನೆ ಮಾಡಿ ಎಂದು ದ್ರೇಶದ್ರೋಹದ ಹೇಳಿಕೆ ಕೊಡುವವರ ವಿರುದ್ಧ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ರಾಷ್ಟ್ರದ್ರೋಹಿ ಹೇಳಿಕೆ ನೀಡುವವರಿಗೆ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು ಎಂದು ಹೇಳಿದ ನನಗೆ ನೋಟಿಸ್ ಬಂದಿದೆ. ಅನುದಾನ ಕೊಡಲಿಲ್ಲ ಎಂಬ ಕಾರಣಕ್ಕೆ ದಕ್ಷಿಣ ಪ್ರತ್ಯೇಕ ರಾಷ್ಟ್ರ ಕೊಡಿ ಎಂದು ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದರು. ನಾನು ದೇಶದ್ರೋಹದ ಹೇಳಿಕೆ ನೀಡುವವರನ್ನು ಕೊಲ್ಲುವ ಕಾಯ್ದೆ ತನ್ನಿ ಎಂದು ಹೇಳಿದ್ದೆ. ಅದಕ್ಕೆ ನನಗೆ ನೋಟಿಸ್‌ ಕೊಟ್ಟಿದ್ದಾರೆ. ಇದಕ್ಕೆಲ್ಲ ಹೆದರಿ ಕೂರುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಕಿಡಿಕಾರಿದರು.

ಈಶ್ವರಾನಂದಪುರ ಶ್ರೀಗೆ ಅವಮಾನ ಕುರಿತು ಸಿಎಂ ತನಿಖೆಗೆ ಸೂಚಿಸಲಿ: ಈಶ್ವರಪ್ಪ ಆಗ್ರಹ

Feb 04 2024, 01:34 AM IST
ಈಶ್ವರಾನಂದಪುರಿ ಸ್ವಾಮೀಜಿಗೆ ಅವಮಾನ ಆಗಿದ್ದರೆ ಅದು ಹಿಂದು ಸಮಾಜಕ್ಕೆ ಮಾಡಿದ ಅವಮಾನ. ಸ್ವಾಮೀಜಿ ಅವರಿಗೆ ಚನ್ನಕೇಶವ ದೇವಾಲಯದ ಗರ್ಭಗುಡಿಯಲ್ಲಿ ಪೂಜೆ ಮಾಡಿ, ತೆರಳಿದ ನಂತರ ಅಲ್ಲಿನ ಅರ್ಚಕರು ಸ್ವಚ್ಛತೆ ಮಾಡಿದ್ದಾರೆ ಎಂದು ನೋವು ತೋಡಿಕೊಂಡಿರುವುದು ಗಮನಕ್ಕೆ ಬಂದಿದೆ. ಅರ್ಚಕರು ಈ ಬಗ್ಗೆ ಸ್ಪಷ್ಟನೆ ನೀಡಿ, ನಾವು ಈಶ್ವರಾನಂದಪುರಿ ಶ್ರೀಗಳಿಗೆ ಸಕಲ ಗೌರವ ನೀಡಿದ್ದೇವೆ. ಅವರು ಯಾಕೆ ಆ ರೀತಿ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿಯದು ಎಂದಿದ್ದಾರೆ. ಹಾಗಾದರೆ, ಎಲ್ಲಿ ಗೊಂದಲ ಆಯಿತು ಎಂಬುದು ಬಹಿರಂಗ ಆಗಬೇಕು. ಶ್ರೀಗಳು ಕನಕದಾಸರ ಅನುಯಾಯಿಗಳು ಆಗಿದ್ದು, ಮುಖ್ಯಮಂತ್ರಿ ಅವರು ಈ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಬಯಲಿಗೆ ಎಳೆಯಬೇಕು. ಈ ಘಟನೆ ಸತ್ಯವಾಗಿದ್ದರೆ ಸಂಬಂಧಪಟ್ಟವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇದು ಸತ್ಯವಾಗಿಲ್ಲವೆಂದರೆ ಇದಕ್ಕೆ ಕಾರಣವಾದರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಒತ್ತಾಯಿಸಿದ್ದಾರೆ.

ಡಿಕೆಸು, ಡಿಕೆಶಿ ಅವರದು ಜಿನ್ನಾ ಸಂಸ್ಕೃತಿ: ಈಶ್ವರಪ್ಪ ಕಿಡಿ

Feb 03 2024, 01:51 AM IST
ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಕೂಗು ಎತ್ತಿರುವ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರದು ಜಿನ್ನಾ ಸಂಸ್ಕೃತಿ. ಕೇಂದ್ರ ಸರ್ಕಾರದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ ಎಂದು ಡಿ.ಕೆ.ಸುರೇಶ್‌ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಕೂಗು ಎತ್ತಿದ್ದಾರೆ. ಈ ಹಿಂದೆ ಇದೇ ಕಾಂಗ್ರೆಸ್‌ನವರು ಕೇವಲ ಅಧಿಕಾರಕ್ಕಾಗಿ ಹಿಂದೂಸ್ತಾನ- ಪಾಕಿಸ್ತಾನ ಅಂತಾ ಒಡೆದು ದೇಶವನ್ನು ಎರಡು ಭಾಗ ಮಾಡಿದ್ದರು. ಹಿಂದೂ, ಮುಸ್ಲಿಂ ಎಲ್ಲರೂ ಒಟ್ಟಾಗಿ ಇದ್ದಾಗ ದೇಶ ವಿಭಜನೆ ಆಯ್ತು. ಕಾಂಗ್ರೆಸ್ ನಾಯಕರದ್ದು ಒಂದು ರೀತಿಯ ಜಿನ್ನಾ ಸಂಸ್ಕೃತಿ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಶಿವಮೊಗ್ಗದಲ್ಲಿ ಕಿಡಿಕಾರಿದ್ದಾರೆ.