• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಈಶ್ವರಪ್ಪ ಬಿಜೆಪಿ ಪ್ರಾಯೋಜಿತ ಡಮ್ಮಿ ಅಭ್ಯರ್ಥಿ: ಆಯನೂರು ಮಂಜುನಾಥ್

Mar 25 2024, 12:51 AM IST
ಬಿಜೆಪಿ ಪ್ರಾಯೋಜಿತ ಡಮ್ಮಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಬಿಜೆಪಿಯ ಹೊಂದಾಣಿಕೆ ಅಭ್ಯರ್ಥಿಯಾಗಿ ಸ್ಪರ್ಧೆ ನೀಡಲಿದ್ದಾರೆ. ಈಶ್ವರಪ್ಪರಿಗೆ ಈ ಶಕ್ತಿ ಎಲ್ಲಿಂದ ಬಂತು ಎಂದು ಯೋಚಿಸಿದಾಗ ಆ ಪಕ್ಷದ ಮೂಲಗಳೇ ಹೇಳುವಂತೆ ಇದೊಂದು ಬಿಜೆಪಿಯವರ ಷಡ್ಯಂತ್ರ. ಈಶ್ವರಪ್ಪನವರಿಗೆ ಬೆನ್ನ ಹಿಂದೆಯೇ ಇಡಿ, ಐಟಿ ಬಂದೂಕಿನ ಗುರಿ ಇಡಲಾಗಿದೆ.

ನನ್ನ ರಕ್ತದ ಕಣ ಕಣದಲ್ಲೂ ಕೇಸರಿ ಇದೆ: ಕೆ.ಎಸ್.ಈಶ್ವರಪ್ಪ

Mar 25 2024, 12:51 AM IST

ನನ್ನ ರಕ್ತದ ಕಣಕಣದಲ್ಲಿಯೂ ಮೋದಿಜಿ, ಬಿಜೆಪಿಯ ಹಿಂದುತ್ವ, ಕೇಸರಿ ಇದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣದಿಂದ ಅನ್ಯಾಯ: ಕೆ.ಎಸ್.ಈಶ್ವರಪ್ಪ

Mar 25 2024, 12:48 AM IST
ಹಿಂದೂ ಹುಲಿ ಯತ್ನಾಳ್, ಸಿ.ಟಿ ರವಿ, ಪ್ರತಾಪ್ ಸಿಂಹ, ಅನಂತಕುಮಾರ್ ಹೆಗಡೆ ಸಹಿತ ನನ್ನನ್ನು ಪರಿಗಣಿಸದೆ ಪುತ್ರ ವಿಜಯೇಂದ್ರನ ರಾಜ್ಯಾಧ್ಯಕ್ಷನಾಗಿಸಿದ್ದು ದೇವರು ಮೆಚ್ಚುತ್ತಾರಾ? ಹಿಂದೂಪರ ಹೋರಾಟಗಾರರು ಬೆಳೆಯಬಾರದು ಬೆಳೆದಲ್ಲಿ ಮಗ ಮುಖ್ಯಮಂತ್ರಿಯಾಗಲು ಅಡ್ಡವಾಗುತ್ತಾರೆ ಎಂದು ಪಕ್ಷ ಕಟ್ಟಲು ಶ್ರಮಿಸಿದ ಎಲ್ಲ ನಾಯಕರಿಗೆ ಅನ್ಯಾಯ ಮಾಡುತ್ತಿದ್ದಾರೆ.

ಪುತ್ರನಿಗೆ ಟಿಕೆಟ್‌ ಸಿಕ್ಕಿದ್ರೆ ಈಶ್ವರಪ್ಪ ಬಂಡಾಯ ಏಳ್ತಿದ್ರಾ?: ಆರ್.ಕೆ.ಸಿದ್ರಾಮಣ್ಣ

Mar 24 2024, 01:37 AM IST
ರಾಜಕಾರಣ ಎಂದರೆ ಅದೊಂದು ರೀತಿಯ ಯುದ್ಧ. ಆಕಸ್ಮಾತ್ ಕಾಂತೇಶ್‌ಗೆ ಟಿಕೆಟ್‌ ಕೊಟ್ಟಿದ್ದರೆ ನಾವು ಕೂಡ ಸಂತೋಷ ಪಡುತ್ತಿದ್ದೆವು. ಜಿಲ್ಲೆಯ ಕುಸ್ತಿಪಟು ಒಬ್ಬ ಬೇರೆ ಜಿಲ್ಲೆಗೆ ಹೋಗಿ ಗೆದ್ದು ಬಂದರೆ ಸಂಭ್ರಮಿಸಿದ ಹಾಗೆ ಕಾಂತೇಶ್ ಕೂಡ ಹಾವೇರಿ ಜಾತ್ರೆಯಲ್ಲಿ ಕುಸ್ತಿ ಗೆದ್ದು ಬಂದಂತೆ ಆಗುತ್ತಿತ್ತು. ಆದರೆ, ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು.

ಬಿಜೆಪಿಯಲ್ಲಿ ಬಿಎಸ್‌ವೈ ಹಿಡಿತ ತಪ್ಪಿಸಲೆಂದೇ ಸ್ಪರ್ಧೆ: ಕೆ.ಎಸ್.ಈಶ್ವರಪ್ಪ

Mar 24 2024, 01:35 AM IST

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿಯೂ ಮಹತ್ತರ ಬದಲಾವಣೆಯಾಗಲಿದೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಭವಿಷ್ಯ ನುಡಿದರು.

ರಾಜ್ಯ ಬಿಜೆಪಿಗೂ ಕಾಂಗ್ರೆಸ್‌ ಸಂಸ್ಕೃತಿ ಬಂದಿದೆ: ಕೆ.ಎಸ್‌.ಈಶ್ವರಪ್ಪ

Mar 22 2024, 01:00 AM IST

ಯತ್ನಾಳ್, ಸಿ.ಟಿ.ರವಿ ಯಾರೂ ಇವರಿಗೆ ಲೆಕ್ಕಕ್ಕೇ ಇಲ್ಲವಾಗಿದೆ. ನಿಮಗೆ ಹಿಂದುತ್ವ ಬೇಕು, ಆದರೆ ಹಿಂದುತ್ವದ ಪರ ಇರುವವರು ಬೇಡ. ಹೀಗೆ ಹಿಂದುತ್ವದ ನಾಯಕರ ತುಳಿಯುತ್ತಾ ಹೋದರೆ ಪಕ್ಷ ಉಳಿಯುತ್ತಾ ಎಂದು  ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದರು.

ಈಶ್ವರಪ್ಪ ನಮ್ಮ ಹಿತ ಯಾವಾಗಲೂ ಬಯಸಿದ್ದಾರೆ

Mar 21 2024, 01:09 AM IST
ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಘೋಷಿಸಿಕೊಂಡಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಲು ಶಿವಮೊಗ್ಗಕ್ಕೆ ಬಂದಿದ್ದು, ಅವರಿಗೆ ಬೆಂಬಲ ನೀಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಭೋವಿ ಸಮಾಜದ ಮುಖಂಡ ಗೂಳಿಹಟ್ಟಿ ಶೇಖರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಈಶ್ವರಪ್ಪ ಅಲ್ಲ, ಬೆಂಬಲಿಗರೇ ಅಭ್ಯರ್ಥಿ ಎಂದುಕೊಳ್ಳಿ

Mar 21 2024, 01:01 AM IST
ಅಭಿಮಾನಿಗಳು ಮತ್ತು ಬೆಂಬಲಿಗರಾದ ನೀವು ಈಗಿನಿಂದಲೇ ಪ್ರತಿ ಬೂತ್‌, ವಾರ್ಡ್‌ಗಳಲ್ಲಿ ನೀವೇ ಸ್ಪರ್ಧಿ ಎಂದು ಭಾವಿಸಿ, ಚುನಾವಣಾ ಪ್ರಚಾರ ನಡೆಸಿ, ಈಶ್ವರಪ್ಪನವರನ್ನು ಗೆಲ್ಲಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ, ಬಿಜೆಪಿ ಪ್ರಮುಖ ಕೆ.ಎಸ್‌. ಈಶ್ವರಪ್ಪ ಶಿವಮೊಗ್ಗದಲ್ಲಿ ಬೆಂಬಲಿಗರಲ್ಲಿ ವಿನಂತಿಸಿದರು.

ಕೆ.ಎಸ್‌.ಈಶ್ವರಪ್ಪ ರಾಜಕೀಯ ರಂಗದ ಅದ್ಭುತ ನಟ

Mar 20 2024, 01:22 AM IST
ಈಶ್ವರಪ್ಪ ರಾಜಕೀಯ ರಂಗದ ಅದ್ಭುತ ನಟ. ಕಲಾವಿದರು ಮುಖಕ್ಕೆ ಬಣ್ಣ ಹಚ್ಚಿದರೆ, ಈಶ್ವರಪ್ಪ ನಾಲಿಗೆಗೆ ಬಣ್ಣ ಹಚ್ಚಿಕೊಂಡಿದ್ದಾರೆ. ಕುಟುಂಬ ರಾಜಕಾರಣದ ಹೆಸರನ್ನು ಹೇಳಿ ತಮ್ಮ ಕುಟುಂಬವನ್ನು ಹೇಗೆ ರಾಜಕಾರಣಕ್ಕೆ ತರಬೇಕು ಎಂದು ಈಶ್ವರಪ್ಪರಿಗೆ ಗೊತ್ತಿದೆ. ಕಾಂತೇಶ್‌ಗೆ ಸಾಮರ್ಥ್ಯ ಇದ್ದಿದ್ದರೆ ಅವರ ಅಪ್ಪ ಯಾಕೆ ಇಷ್ಟು ಹೊಡೆದಾಟ ಮಾಡಬೇಕಿತ್ತು ಎಂದು ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ವ್ಯಂಗ್ಯವಾಡಿದ್ದಾರೆ.

ಮೋದಿ ರ್‍ಯಾಲಿಗೂ ಹೋಗದೆ ಬಿಜೆಪಿಗರಿಗೆ ಈಶ್ವರಪ್ಪ ಸಡ್ಡು!

Mar 19 2024, 01:47 AM IST
ಮಠಗಳ ಭೇಟಿಗೆ ತೆರಳಿದ ಮಾಜಿ ಡಿಸಿಎಂ ಆರ್‌ಎಸ್‌ಎಸ್‌ನ ಗೋಪಾಲ್‌ ಮನವಿಗೂ ಬಗ್ಗದೆ ಹಟ ಹಿಡಿದು ಕುಳಿತಿದ್ದಾರೆ.
  • < previous
  • 1
  • ...
  • 12
  • 13
  • 14
  • 15
  • 16
  • 17
  • 18
  • 19
  • 20
  • ...
  • 23
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved