15 ದಿನಗಳಲ್ಲಿ ಡಿಪೋ ಉದ್ಘಾಟಿಸದಿದ್ರೆ ಉಗ್ರ ಹೋರಾಟ
Apr 05 2025, 12:50 AM ISTತಾಲೂಕಿನ ಗ್ರಾಮಾಂತರ ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಪಟ್ಟಣದ ಹೊರವಲಯದಲ್ಲಿ ₹8 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ. ಡಿಪೋ ನಿರ್ಮಾಣವಾಗಿದೆ. ಇದರ ಕಾಮಗಾರಿ ಸಂಪೂರ್ಣ ಮುಗಿದಿದೆ. ಆದರೂ, ಉದ್ಘಾಟಿಸಿ, ಜನಸೇವೆಗೆ ಸಮರ್ಪಿಸದೇ ವಿಳಂಬ ಮಾಡುತ್ತಿರುವುದು ಖಂಡನೀಯ. ಮುಂದಿನ 15 ದಿನಗಳೊಳಗೆ ಡಿಪೋ ಉದ್ಘಾಟನೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾಲೂಕು ಹಸಿರು ಸೇನೆಯ ಅಧ್ಯಕ್ಷ ಬಸವಾಪುರ ರಂಗನಾಥ್ ಹೇಳಿದ್ದಾರೆ.