ಜಿಲ್ಲೆಯ 5000 ಯುವಕರಿಗೆ ದೊಡ್ಡ ಕಂಪನಿಗಳಲ್ಲಿ ಉದ್ಯೋಗ
Nov 22 2024, 01:17 AM ISTಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ 5000 ಯುವಕರಿಗೆ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಯೋಜನೆ ರೂಪಿಸಿದ್ದೇನೆ. ಟೊಯೋಟಾ ಕಂಪನಿ ಈಗಾಗಲೇ ವಿಜಯಪುರದಲ್ಲಿ ಎರಡು ದಿನಗಳ ಉದ್ಯೋಗ ಮೇಳ ನಡೆಸಿದ್ದು, ನೂರಾರು ಯುವಕರು ಉದ್ಯೋಗ ಪಡೆಯಲಿದ್ದಾರೆ. ಇನ್ನೂ, ಹೆಸರಾಂತ ಕಂಪನಿಗಳ ಮೂಲಕ ಉದ್ಯೋಗ ಮೇಳ ಆಯೋಜಿಸಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.