ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಪುಸ್ತಕಗಳನ್ನು ಓದಲೇಬೇಕು
Aug 25 2024, 01:57 AM ISTಮನುಜ ಮತ ವೇದಿಕೆವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಪಡೆಯಬೇಕೆಂದರೆ ಪುಸ್ತಕಗಳನ್ನು ಓದಲೇಬೇಕು. ಪುಸ್ತಕಗಳನ್ನು ಓದದಿದ್ದರೆ ಯಾವ ಉನ್ನತ ಸರ್ಕಾರ ಹುದ್ದೆಯನ್ನು ಪಡೆಯಲಾಗುವುದಿಲ್ಲ. ಯುವಕರು ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ತಮ್ಮ ಹಳ್ಳಿಗಳ ಬಗ್ಗೆ ಚಿಂತಿಸಬೇಕು. ಸಮಾಜದ ಒಳಗೆ ನಡೆಯುವ ಅನೀತಿಗಳ ಬಗ್ಗೆ ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಮೊಬೈಲ್ ಚಟವಾಗುತ್ತಿದ್ದು, ಇದು ರೋಗವಾಗಿ ಭವಿಷ್ಯವನ್ನು ಕಸಿಯುತ್ತದೆ ಎಂದು ಡಿವೈಎಸ್ಪಿ ರವಿಪ್ರಸಾದ್ ಹೇಳಿದರು .