ಸ್ಧಳೀಯರು ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಸುವಂತಾಗಬೇಕು: ಸೋಮಣ್ಣ

Nov 24 2023, 01:30 AM IST
ಳೀಯರು ಉದ್ಯಮಿಗಳಾಗಿ ಹೆಚ್ಚು- ಹೆಚ್ಚು ಉದ್ಯೋಗ ನೀಡುವಂತಾಗಬೇಕು ಎಂದು ಮಾಜಿ ಸಚಿವ ವಿ. ಸೋಮಣ್ಣ ತಿಳಿಸಿದರು.ಹೆಗ್ಗೋಠಾರ-ಮೇಗಲಹುಂಡಿ ರಸ್ತೆಯಲ್ಲಿರುವ ಬಿಲ್ವ ಗ್ರಾನೈಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ಚಾಮರಾಜನಗರದ ಜಿಲ್ಲೆಯಲ್ಲಿ ಸಂಪನ್ಮೂಲ ಹೇರಳವಾಗಿದ್ದು, ಹೊರಗಿನವರು ಉದ್ಯಮ ಸ್ಥಾಪನೆ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದರು. ಸ್ಧಳೀಯರು ಭೂಮಿ ಕಳೆದುಕೊಂಡು, ಉದ್ಯೋಗವಿಲ್ಲದೆ ಅಲೆದಾಡುವಂತಹ ಪರಿಸ್ಧಿತಿ ನಿರ್ಮಾಣವಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಾನು ಉಸ್ತುವಾರಿ ಸಚಿವನಾಗಿದ್ದಾಗ ಕೈಗಾರಿಕೆ ಪ್ರದೇಶ ಸ್ಧಾಪನೆಗೆ ಒತ್ತು ನೀಡುವ ಮೂಲಕ ಸ್ಧಳೀಯರು ಉದ್ಯಮ ಸ್ಥಾಪನೆ ಮಾಡುವಂತೆ ಸಲಹೆ ನೀಡಿದ್ದೆನು. ಪರಿಣಾಮ ಹಲವರು ಉದ್ಯಮ ಸ್ಧಾಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಪ್ರಶಂಸೆ ‍ವ್ಯಕ್ತಪಡಿಸಿದರು.