ನಗರಸಭೆ ಉಪ ಚುನಾವಣೆ: ಒಂದು ಸ್ಥಾನ, ಒಂಬತ್ತು ಜನರ ನಾಮಪತ್ರ

Dec 16 2023, 02:01 AM IST
ಚಿಂತಾಮಣಿ ನಗರದ ವಾರ್ಡ್ ನಂ. ೧೮ರ ಚೌಡರೆಡ್ಡಿಪಾಳ್ಯದ ನಗರಸಭಾ ಸದಸ್ಯ ಮಹಮದ್ ಶಫೀಕ್ ಸ್ಥಾನವು ಅನರ್ಹಗೊಂಡ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಲಿದ್ದು, ನಾಮತ್ರ ಸಲ್ಲಿಸಲು ಡಿ.೧೫ ಕೊನೆಯ ದಿನವಾದ ಇಂದು ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಗರಸಭೆಗೆ ಧಾವಿಸಿ ಚುನಾವಣಾಧಿಕಾರಿ ಕವಿತರಿಗೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದಿಂದ ಮಹಮದ್‌ಶಫೀಕ್ , ಬಿಜೆಪಿಯಿಂದ ಸೂರ್ಯಪ್ರಕಾಶ್, ಕೆಆರ್‌ಎಸ್‌ನಿಂದ ಆರ್.ರವಿಕುಮಾರ್ ಜೆಡಿಎಸ್‌ನಿಂದ ಮುನಾವರ್‌ಪಾಷ, ಎಸ್‌ಡಿಪಿಐಯಿಂದ ಅನ್ಸರ್‌ಪಾಷ, ಶಂಶುದ್ದೀನ್, ಸ್ವತಂತ್ರ ಅಭ್ಯರ್ಥಿಗಳಾಗಿ ಮಹಮದ್ ಮುಬಾರಕ್, ಸೈಯದ್‌ಅರ್ಶಿಯಾ, ಬಿ.ಅಯೂಬ್‌ಖಾನ್ ಸೇರಿದಂತೆ ಒಟ್ಟು ೯ ಮಂದಿ ನಾಮಪತ್ರಗಳನ್ನು ಸಲ್ಲಿಸಿದರು.