ನಿಡಗುಂದಿ ಪಪಂ ಉಪ ಚುನಾವಣೆ: ಬಿಜೆಪಿ ಗೆಲುವು
Aug 21 2025, 02:00 AM ISTನಿಡಗುಂದಿ: ನಿಡಗುಂದಿ ಪಟ್ಟಣ ಪಂಚಾಯತಿಯ ವಾರ್ಡ್ 5ರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ತೆರವಾದ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಿಜೆಪಿ ಅಭ್ಯರ್ಥಿ ಈರಣ್ಣ ಗೋನಾಳ 142 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಮರಿಯಪ್ಪ ಹರಿಜನ 136 ಮತಗಳನ್ನು ಪಡೆದಿದ್ದು, ಪಕ್ಷೇತರ ಅಭ್ಯರ್ಥಿ ಶೇಖರ ದೊಡಮನಿ 70 ಮತಗಳು ಮತ್ತು 7 ಮತಗಳು ನೋಟಾಗೆ ದೊರೆತಿವೆ. ಒಟ್ಟು 355 ಮತಗಳಲ್ಲಿ ಕೇವಲ 6 ಮತಗಳ ಅಂತರದಿಂದ ಬಿಜೆಪಿ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್‌ಗೆ ನಿರಾಸೆ ಮೂಡಿಸಿದೆ.