ಸೋ.ಪೇಟೆ: ಎಸ್ಸೆಸ್ಸೆಲ್ಸಿ ಟಾಪರ್‌ಗಳಿಗೆ ರೋಟರಿಯಿಂದ ಸನ್ಮಾನ
Jun 07 2025, 12:13 AM ISTಬೆಂಕಳ್ಳಿ-ಕೊತ್ನಳ್ಳಿ ಗ್ರಾಮದ ಸಿ.ಟಿ.ಸತೀಶ್, ಪ್ರಗತಿ ದಂಪತಿ ಪುತ್ರಿ ಸಿ.ಎಸ್.ಆದ್ವಿ (೬೨೫ಕ್ಕೆ ೬೨೩ ಅಂಕ) ಜಿಲ್ಲೆಗೆ ಟಾಪರ್‌ನೊಂದಿಗೆ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ, ಹೆತ್ತೂರು ಕೊಣಬನಹಳ್ಳಿಯ ಚಂದ್ರಕುಮಾರ್, ಶಿಲ್ಪಾ ದಂಪತಿ ಪುತ್ರಿ ಕೆ.ವಿ.ಪಂಚಮಿ (೬೨೧ ಅಂಕ) ಜಿಲ್ಲೆಗೆ ದ್ವಿತೀಯ ಹಾಗೂ ರಾಜ್ಯದಲ್ಲಿ ೫ ನೇ ಸ್ಥಾನ ಪಡೆದುಕೊಂಡಿದ್ದಾರೆ. ಚಿಕ್ಕತೋಳೂರು ಗ್ರಾಮದ ಸಿ.ಜೆ.ಸೋಮಶೇಖರ್, ಶೈಲಾ ದಂಪತಿ ಪುತ್ರಿ ಸಿ.ಎಸ್.ತೇಜಸ್ವಿನಿ (೬೧೯ ಅಂಕ) ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದರು.