ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ ರಾಜ್ಯದಲ್ಲಿ 8ನೇ ಸ್ಥಾನ
May 03 2025, 12:19 AM ISTಚಿಕ್ಕಮಗಳೂರು, ಕಾಫಿಯ ನಾಡು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಈ ಸಾಲಿನಲ್ಲಿ 10ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಏರಿದೆ. ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಶಾಲೆ ವಿದ್ಯಾರ್ಥಿನಿ ಎಚ್. ನವ್ಯಶ್ರೀ 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿ ಟಾಫ್ ಒನ್ ಸ್ಥಾನದಲ್ಲಿದ್ದರೆ, ತರೀಕೆರೆ ಅರುಣೋದಯ ಪ್ರೌಢಶಾಲೆ ವಿದ್ಯಾರ್ಥಿನಿ ಸುದೀಕ್ಷಾ ಹಾಗೂ ಕಡೂರಿನ ವೇದಾವತಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ಶ್ವೇತಾ ಅವರು 623 ಅಂಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.