ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ
Feb 04 2024, 01:34 AM ISTಗುಳೇದಗುಡ್ಡ: ತಾಲೂಕಿನ ಕಟಗೇರಿಯಲ್ಲಿ ಫೆ.10ರಂದು ಜರುಗುವ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ.ಪಿ.ಎಂ. ಹುಗ್ಗಿ ಅವರನ್ನು ಶುಕ್ರವಾರ ಕೊಂಕನಕೊಪ್ಪ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಹಿರಿಯರು ಗ್ರಾಮದ ದ್ಯಾಮವ್ವ ತಾಯಿ ದೇವಸ್ಥಾನದಲ್ಲಿ ಸನ್ಮಾನ ಮಾಡಿ, ಪತ್ರ ನೀಡಿ ಅಧಿಕೃತ ಆಹ್ವಾನ ನೀಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ.ಎಚ್.ಎಸ್. ಘಂಟಿ ಸನ್ಮಾನಿಸಿ ಮಾತನಾಡಿದರು.