ಕರ್ನಾಟಕ ಬಂದ್ಗೆ ಕರವೇ ಪ್ರವೀಣ್ ಶೆಟ್ಟಿ ಬಣ ವಿರೋಧ
Mar 20 2025, 01:16 AM ISTಮಾ.22ರಂದು ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಕರ್ನಾಟಕ ಬಂದ್ಗೆ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿ. ಎಸ್. ಬೋಜೇಗೌಡ ವಿರೋಧ ವ್ಯಕ್ತಪಡಿಸಿದ್ದು ಯಾವುದೇ ಕಾರಣಕ್ಕೂ ಬೇಲೂರು ಬಂದ್ ಮಾಡದಂತೆ ವರ್ತಕರಲ್ಲಿ ಮನವಿ ಮಾಡಿದ್ದಾರೆ. ಬಂದ್ ಮಾಡುವುದರಿಂದ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ನಷ್ಟವಾಗುವುದು ಬಿಟ್ಟರೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಹಾಗಾಗಿ ಈ ಬಂದ್ಗೆ ಸಂಘಟನೆಗಳು, ವರ್ತಕರು, ಹೋಟೆಲ್ ಮಾಲೀಕರು, ಆಟೋ ಮಾಲೀಕರು, ಶಾಲಾ-ಕಾಲೇಜುಗಳು ಬೆಂಬಲ ಕೊಡಬಾರದೆಂದು ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಮನವಿ ಮಾಡಿದ್ದಾರೆ.