ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ
May 20 2024, 01:36 AM ISTಜಮೀನದಲ್ಲಿ ಕೊಳವೆ ಬಾವಿ ಕೊರೆಯುಸುವ ಪೂರ್ವಭಾವಿಯಾಗಿ ಜಮೀನು ಮಾಲೀಕರು 15 ದಿನ ಮುಂಚಿತವಾಗಿ ತಹಸೀಲ್ದಾರ್, ಗ್ರಾಪಂ, ಗ್ರಾಮ ಲೆಕ್ಕಿಗ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗ, ಪಂಚಾಯತ ಎಂಜಿನಿಯರಿಂಗ್ ವಿಭಾಗ, ಇಲ್ಲವೆ ಪುರಸಭೆ ಇವರಿಗೆ ಹಾಗೂ ಸಂಬಂಧಿಸಿದ ಇಲಾಖೆಗೆ ಲಿಖಿತ ಮಾಹಿತಿ ನೀಡಬೇಕು. ಈ ನಿಯಮಗಳನ್ನು ಪಾಲಿಸದ ಜಮೀನು ಮಾಲೀಕರಿಗೆ ಹಾಗೂ ಬೋರ್ವೆಲ್ ಏಜೆನ್ಸಿ, ಮಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.