ಎರಡು ವರ್ಷ ಕಳೆದರೂ ಮುಗಿಯದ ಪಶು ಚಿಕಿತ್ಸಾಲಯ ನಿರ್ಮಾಣ ಕಾಮಗಾರಿ
May 28 2025, 12:30 AM ISTಸುಮಾರು 42 ಲಕ್ಷ ರು. ವೆಚ್ಚದಲ್ಲಿ ಪಶು ಇಲಾಖೆ ಕಟ್ಟಡ ಆರಂಭವಾಗಿ ಎರಡು ವರ್ಷವಾದರೂ ಹಣದ ಕೊರತೆಯಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಹೊಸ ಕಟ್ಟಡದ ನೆಲಹಾಸು ಹಾಗೂ ಕಟ್ಟಡ ಮೇಲಿನ ಕೊಠಡಿ ಕಾಮಗಾರಿ ಕೆಲಸಗಳು ಬಾಕಿ ಇದೆ. ಹಾಲಿ ಕಟ್ಟಿದ ರೂಮ್‌ನಲ್ಲಿ ಬಾಗಿಲು ಇಲ್ಲದೆ ಇರುವುದರಿಂದ ಕೆಲವು ಖಾಸಗಿ ವ್ಯಕ್ತಿಗಳು ಹಳೇಯ ವಸ್ತುಗಳನ್ನು ಹಾಕಿದರೂ ಹೇಳುವವರು, ಕೇಳುವರು ಇಲ್ಲದ ಸ್ಥಿತಿಯಾಗಿದೆ. ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಧೂಮಪಾನ, ಮದ್ಯಪಾನ ಮಾಡುವ ಕೇಂದ್ರವಾಗಿದೆ. ಇದು ಸರ್ಕಾರದ ಆಡಳಿತ ವ್ಯವಸ್ಥೆ ಅಂತ ರೈತಾಪಿ ಜನರು ಪಶುಸಂಗೋಪನೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.