ಗಂಡನಿಂದಲೇ ಪತ್ನಿ ಕೊಲೆ ಅನುಮಾನ ಮರು ಮರಣೋತ್ತರ ಪರೀಕ್ಷೆಗೆ ಮನವಿ
Jul 15 2025, 11:45 PM ISTಕೆಳಹಳ್ಳಿ ದಲಿತ ಮಹಿಳೆ ಶಾರದರವರನ್ನ ಗಂಡನಾದ ಪ್ರಸನ್ನ ಕೊಲೆ ಮಾಡಿರುವ ಬಗ್ಗೆ ಅನುಮಾನವಿದ್ದು, ಮರು ಮರಣೋತ್ತರ ಪರೀಕ್ಷೆ ನಡೆಸಿ ಸತ್ಯತೆ ಹೊರ ಬರುವ ಮೂಲಕ ನ್ಯಾಯಕೊಡಿಸಿ ತಪ್ಪಿಕಸ್ತರಿಗೆ ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸಿ ಡಿಸಿ ಕಚೇರಿ ಮುಂದೆ ದಲಿತಪರ ಸಂಘಟನೆಗಳ ಮಹಾ ಒಕ್ಕೂಟದಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮತ್ತು ಹಿಮ್ಸ್ ನಿರ್ದೇಶಕ ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು. ಹಳೇಬೀಡು ಎಸ್‌ಐ ಸಿದ್ದಲಿಂಗ ಬನವಾಸೆಯವರಿಗೆ ದೂರವಾಣಿ ಕರೆ ಮೂಲಕ ಮರಣೋತ್ತರ ಪರೀಕ್ಷೆ ಬಗ್ಗೆ ವಿಚಾರಿಸಿದಾಗ ಸಹಜ ಸಾವು ಎಂದು ಸಬೂಬು ಹೇಳುತ್ತಾರೆ ಎಂದು ದೂರಿದರು.