ಮಕ್ಕಳಿಂದಲೇ ಕೊಲೆ ಯತ್ನ ಕಾಪಾಡುವಂತೆ ತಂದೆ ಮನವಿ
Jan 31 2025, 12:45 AM ISTಆಸ್ತಿಗಾಗಿ ನನ್ನ ಮಕ್ಕಳೇ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದು, ಮಕ್ಕಳಿಂದಲೇ ನನ್ನ ಪ್ರಾಣಕ್ಕೆ ಅಪಾಯ ಇರುವುದರಿಂದ ರಕ್ಷಣೆ ಕೊಟ್ಟು ನ್ಯಾಯ ಕೊಡಿಸಬೇಕೆಂದು ನೊಂದ ಮಂಜುನಾಥ್ ಕೋರಿದರು. ಪಿತ್ರಾರ್ಜಿತವಾದ ಆಸ್ತಿಯನ್ನು ಮೂರು ಜನಕ್ಕೂ ೪ ಎಕರೆಯಂತೆ ವಿಭಾಗ ಮಾಡಿಕೊಟ್ಟಿದ್ದಾರೆ. ಕೆಲ ವರ್ಷಗಳಿಂದ ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದೇನೆ. ಅದಕ್ಕಾಗಿ ಸಾಲ ಮಾಡಿದ್ದು, ನನ್ನ ಹೆಸರಿನಲ್ಲಿರುವ ಜಮೀನನ್ನು ಮಾರಾಟ ಮಾಡಲು ಬಿಡುತ್ತಿಲ್ಲ ಹಾಗೂ ನನ್ನ ಯೋಗಕ್ಷೇಮವನ್ನು ನೋಡುತ್ತಿಲ್ಲ ಎಂದು ಮಂಜುನಾಥ್ ದೂರಿದರು.