ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು 1ನೇ ಸತ್ರ ನ್ಯಾಯಾಲಯ ತಿರಸ್ಕರಿಸಿದೆ. ಆ. 6ರಂದು ವಿಚಾರಣೆ ಮುಂದೂಡಲಾಗಿದ್ದು, ಅಂದು ಫಯಾಜ್ ಖುದ್ದು ಹಾಜರಾಗುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯನ್ನು ಕೊಂದು ಬಳಿಕ ಮೃತದೇಹ ಸುಟ್ಟು ಹಾಕಿದ್ದ ಮೃತನ ಪತ್ನಿ ಹಾಗೂ ಆಕೆಯ ಭಾವಿ ಅಳಿಯನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭಾರತದಾದ್ಯಂತ ಸುದ್ದಿಯಾಗಿದ್ದ ಕೊಲೆ ಪ್ರಕರಣವೊಂದು ಇದೀಗ ಸಿನಿಮಾ ಆಗುತ್ತಿದೆ. ಹನಿಮೂನ್ ವೇಳೆ ಪತ್ನಿಯ ಸಂಚಿಗೆ ಬಲಿಯಾಗಿ ಜೀವ ಕಳೆದುಕೊಂಡ ರಾಜಾ ರಘುವಂಶಿಯ ಕತೆಯುಳ್ಳ ಈ ಸಿನಿಮಾದ ಹೆಸರು ‘ಹನಿಮೂನ್ ಇನ್ ಶಿಲ್ಲಾಂಗ್’.