ಚನ್ನಪಟ್ಟಣದಲ್ಲಿ ರೌಡಿ ಶೀಟರ್ ಕೊಲೆ
Nov 15 2024, 12:38 AM ISTಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಚನ್ನಪಟ್ಟಣದಲ್ಲಿ ನಡೆದಿದೆ. ಸೆಕ್ಷನ್ ೩೦೭ ಅಡಿ ಆರೋಪಿಯಾಗಿದ್ದ ರಖಿತಾ ಅಲಿಯಾಸ್ ಗುಂಡ (೩೫) ಕೊಲೆಯಾಗಿರುವ ರೌಡಿ ಶೀಟರ್. ರಾತ್ರಿ ಆಟೋದಲ್ಲಿ ಕುಳಿತು ಸ್ನೇಹಿತರೊಂದಿಗೆ ಕಂಠಪೂರ್ತಿ ಕುಡಿದಿದ್ದು, ರೌಡಿ ಶೀಟರ್ ರಖಿತಾ ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತರೊಂದಿಗೆ ಜಗಳವಾಡಿಕೊಂಡಿದ್ದನು. ಇದಾದ ಬಳಿಕ ಕೊಲೆಯಾಗಿದ್ದಾನೆ.