ಹಿಂದೂಗಳಲ್ಲಿ ಯಾಕೆ ಇನ್ನೂ ಮುಟ್ಟಿತಟ್ಟಿ ಅನ್ನೋದು ಇದೆ: ಡಾ. ಮಲ್ಲಿಕಾರ್ಜುನ ಖರ್ಗೆ
May 04 2025, 01:34 AM ISTಅಸ್ಪೃಶ್ಯತೆ ಹೋಗಲಾಡಿಸಬೇಕೆಂದು ಸಂವಿಧಾನದಲ್ಲಿ ಬರೆಯಲಾಗಿದೆ. ಆದರೆ ಅಸ್ಪೃಶ್ಯತೆ ಅನ್ನೋದು ಇನ್ನೂ ದೂರವಾಗಿಲ್ಲ. ಮುಸಲ್ಮಾನರಲ್ಲಿ, ಕ್ರಿಶ್ಚಿಯನ್ನರಲ್ಲಿ ಮುಟ್ಟಿ ತಟ್ಟಿ ಅಷ್ಟಾಗಿ ಮಾಡೋದಿಲ್ಲ. ಆದರೆ ಹಿಂದುಗಳಲ್ಲಿ ಯಾಕೆ ಇನ್ನೂ ಮುಟ್ಟಿತಟ್ಟಿ ಅನ್ನೋದು ಇದೆ? ಎಂದು ಎಐಸಿಸಿ ಅದ್ಯಕ್ಷರು, ರಾಜ್ಯಸಬೆ ವಿರೋಧ ಪಕ್ಷ ನಾಯಕರೂ ಆಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.