ಹೊಲದಲ್ಲಿ ರೈತನ ಮೇಲೆ ಚಿರತೆ ದಾಳಿ
Aug 12 2024, 01:02 AM ISTಹೊಳೆನರಸೀಪುರ ತಾಲೂಕಿನ ಕೆರಗೋಡು ಗೋಪನಹಳ್ಳಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಎಂಬ ರೈತನ ಮೇಲೆ ಚಿರತೆ ದಾಳಿ ನಡೆಸಿ, ಗಾಯಗೊಳಿಸಿದೆ. ಹಳ್ಳಿಮೈಸೂರು ಹೋಬಳಿಯ ಕೆರಗೋಡು ಗೋಪನಹಳ್ಳಿಯ ಜಯಣ್ಣ ಎಂಬುವರ ಪುತ್ರ ನವೀನ್ ಜಮೀನಿನಲ್ಲಿ ಎಂದಿನಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಂಜೆ ೫.೧೫ರ ಸುಮಾರಿನಲ್ಲಿ ಚಿರತೆ ದಾಳಿ ನಡೆಸಿದೆ. ಕೈಯಲ್ಲಿ ಕುಡುಗೋಲು ಹಿಡಿದು ಕೆಲಸ ಮಾಡುತ್ತಿದ್ದ ನವೀನ ಧೈರ್ಯವಾಗಿ ಕುಡುಗೋಲಿನಿಂದ ಪ್ರತಿದಾಳಿ ನಡೆಸುವ ಸಂದರ್ಭದಲ್ಲಿ ನವೀನರ ಕಾಲಿನ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದೆ.