ಚಿರತೆ ದಾಳಿಗೆ 5 ಕುರಿ, 3 ಮೇಕೆ ಬಲಿ; ಲಕ್ಷಾಂತರ ರು. ನಷ್ಟ
Dec 04 2024, 12:35 AM ISTಚಿರತೆ ದಾಳಿ ಮಾಡಿ 5 ಕುರಿ, 3 ಮೇಕೆಗಳನ್ನು ಬಲಿ ಪಡೆದಿರುವ ಘಟನೆ ಪಾಂಡವಪುರ ತಾಲೂಕಿನ ರಾಗಿಮುದನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಗ್ರಾಮದ ಮಹದೇವು ಬಿನ್ ಲೇಟ್ ಅಂಕೇಗೌಡರ ಅವರಿಗೆ ಸೇರಿದ ತೋಟದ ಮನೆಯಲ್ಲಿ ಕೂಡಿ ಹಾಕಿದ್ದ ಕುರಿ, ಮೇಕೆಗಳ ಮೇಲೆ ದಾಳಿ ಮಾಡಿರುವ ಚಿರತೆ ಒಟ್ಟು 8 ಸಾಕು ಪ್ರಾಣಿಗಳನ್ನು ಕೊಂದಿದೆ. ಇದರಿಂದ ರೈತನಿಗೆ ಸರಿಸುಮಾರು ಅಂದಾಜು 1.20 ಸಾವಿರ ರು. ನಷ್ಟವಾಗಿದೆ.