ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ
Oct 05 2024, 01:31 AM ISTತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹುರುಳಿಹಳ್ಳಿ, ಮಣಕೀಕೆರೆ, ಹೊಸಹಳ್ಳಿ, ಚೌಲಿಹಳ್ಳಿ, ಮೀಸೆತಿಮ್ಮನಹಳ್ಳಿ ಭಾಗಗಳಲ್ಲಿ ಕಳೆದ ಮೂರು ತಿಂಗಳಿನಿಂದಲೂ ಗ್ರಾಮಸ್ಥರ ನಿದ್ದೆಗೆಡಿಸಿದ್ದ ೬ ವರ್ಷದ ಚಿರತೆಯು ಅರಣ್ಯ ಇಲಾಖೆಯು ಗುರುವಾರ ರಾತ್ರಿ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.