ಮದಗದ ಕೆರೆ ಬಳಿ ಚಿರತೆ ಪತ್ತೆಯ ಹಿಂದೆ ಅನುಮಾನದ ಹುತ್ತ
Aug 03 2025, 01:30 AM ISTಚಿಕ್ಕಮಗಳೂರು, ಕಡೂರು ತಾಲೂಕಿನ ಮದಗದ ಕೆರೆ ಬಳಿ ಅನುಮಾನಾಸ್ಪದವಾಗಿ ಮೃತಪಟ್ಟ ಚಿರತೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿಯ ತುರುವೇಕೆರೆ ವಲಯದ ದೇವಿಹಳ್ಳ ಬಳಿ ಬೋನಿಗೆ ಬಿದ್ದಿದ್ದ ಚಿರತೆಯನ್ನು ಕಡೂರು ತಾಲೂಕಿನ ಮದಗದ ಕೆರೆ ಬಳಿ ಅರಣ್ಯ ಇಲಾಖೆ ಅಧಿಕಾರಿಗಳೇ ತಂದು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಚಿರತೆಯನ್ನು ತಂದಿದೆ ಎನ್ನಲಾದ ಲಾರಿಯ ಸಿಸಿಟಿವಿ ವೀಡಿಯೋಗಳು ಇದೀಗ ವೈರಲ್ ಆಗಿವೆ.