ಅರೇಹಳ್ಳಿ ಕಾಫಿ ಕೋಅಪರೇಟಿವ್ ಸೊಸೈಟಿಗೆ ಪದಾಧಿಕಾರಿಗಳ ಚುನಾವಣೆ
Nov 28 2024, 12:30 AM ISTಮೈಸೂರು ಪ್ರಾಂತೀಯ ಸಹಕಾರ ಸಂಘಗಳ ಜಂಟಿ ನಿಬಂಧಕರ ಆದೇಶದ ಮೇರೆಗೆ ಚುನಾವಣಾ ಅಧಿಕಾರಿಯಾಗಿ ಗುರುಮೂರ್ತಿರವರು ಸಹಕಾರ ಸಂಘಗಳ ಕಾಯ್ದೆ ನಿಯಮಗಳ ಪ್ರಕಾರ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು. ತೆರವಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಯು.ಪಿ ಮಲ್ಲೇಶ್ ಅಧ್ಯಕ್ಷರಾಗಿ ಹಾಗು ಎಂ.ಆರ್ ವಿನೋದ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಘೋಷಿಸಿದರು.