ಯಾವಾಗ ಬೇಕಾದ್ರು ಚುನಾವಣೆ ನಡೆಯಬಹುದು
Jul 24 2024, 12:17 AM ISTಕನ್ನಡಪ್ರಭ ವಾರ್ತೆ ನಾಲತವಾಡ ಕಾಂಗ್ರೆಸ್ ಸರ್ಕಾರ ಹಗರಣಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಯಾವಾಗ ಸಮಯದಲ್ಲಾದರೂ ಚುನಾವಣೆ ಆಗಬಹುದು ತಯಾರಾಗಿರಿ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ಡಿಗ್ಗಿ ಮಂಗಳ ಕಾರ್ಯಾಲಯದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ಎಂಬ ನೋವಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಂಡ ಕನಸು ಬಾಕಿ ಉಳಿದುಕೊಂಡಿದೆ ಎಂಬ ನೋವಿದೆ. ನನ್ನ ಅಧಿಕಾರಾವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡಿದ್ದೇನೆ. ನಾನು ಯಾರಿಗೂ ಮೋಸ ಮಾಡಿಲ್ಲ ಎಂಬ ತೃಪ್ತಿ ನನಗೆ ಇದೆ ಎಂದರು.