ಗೆಲ್ಲುವ, ಪಕ್ಷನಿಷ್ಠರಿಗೆ ಟಿಕೆಟ್: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
Mar 10 2024, 01:31 AM ISTಯಾವುದೇ ಚುನಾವಣೆ ಇರಲಿ, ಟಿಕೆಟ್ ಹಂಚಿಕೆ ಒಂದು ಪ್ರಕ್ರಿಯೆ. ಇದರಲ್ಲಿ ಯಾವುದೇ ಕಸರತ್ತು ಎಂಬುದು ಇಲ್ಲ. ಗೆಲ್ಲುವ ಅಭ್ಯರ್ಥಿಗಳಿಗೆ, ಯಾರು ಪಕ್ಷಕ್ಕೆ ನಿಷ್ಟರಾಗಿದ್ದಾರೆ ಅವರಿಗೆ ಟಿಕೆಟ್ ಸಿಗಲಿದೆ. ಪಕ್ಷವು ಈಗಾಗಲೇ 195 ಸೀಟ್ ಘೋಷಣೆ ಮಾಡಿದೆ. ಎಲ್ಲರೊಂದಿಗೆ ಮಾತುಕತೆ ನಡೆಸಿ, ಗೆಲ್ಲುವ ಅಭ್ಯರ್ಥಿಗಳ ಗಮನಿಸಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಶಿವಮೊಗ್ಗದಲ್ಲಿ ಹೇಳಿದ್ದಾರೆ.