ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಲ್ಲಹಳ್ಳಿ ಶಾಲೆಗೆ ಸಮಗ್ರ ಪ್ರಶಸ್ತಿ
Aug 24 2025, 02:00 AM ISTಪ್ರೌಢಶಾಲೆಗಳ ದಕ್ಷಿಣವಲಯ ಮಟ್ಟದ ಕ್ರೀಡಾಕೂಟದಲ್ಲಿ ೩೦ ಶಾಲೆಗಳು ಭಾಗವಹಿಸಿದ್ದು, ಸರ್ಕಾರಿ ಪ್ರೌಢಶಾಲೆ ಕಲ್ಲಹಳ್ಳಿ ಶಾಲೆಯು ಬಾಲಕಿಯರ ವಿಭಾಗದಲ್ಲಿ ೩೨ ಅಂಕ ಗಳಿಸುವುದರೊಂದಿಗೆ ಪ್ರಥಮ ತಂಡವಾಗಿ ಸಮಗ್ರ ಪ್ರಶಸ್ತಿ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ. ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ ಸಿ ರಘು ಹಾಗೂ ಮುಖ್ಯೋಪಾಧ್ಯಾಯರಾದ ಎ ಎಸ್ ಉಮಾಮಣಿ ಮತ್ತು ಶಿಕ್ಷಕ ವೃಂದ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಸಂತಸ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.